#

Department of Kannada:

ಬೀದರಜಿಲ್ಲೆಯ ಬಸವಕಲ್ಯಾಣವುಇತಿಹಾಸ ಪ್ರಸಿದ್ಧ ನಗರವಾಗಿದೆ. ಕಲ್ಯಾಣದಚಾಲುಕ್ಯದೊರೆ ಬಿಜ್ಜಳ ಮಹಾರಾಜನು 12ನೇ ಶತಮಾನದಲ್ಲಿ ರಾಜ್ಯವಾಳಿದ ನಗರವಾಗಿದೆ.ಬಿಜ್ಜಳನ ಪ್ರಧಾನಮಂತ್ರಿ ಬಸವಣ್ಣನವರಕರ್ಮಭೂಮಿ ಈ ನಗರ, ಮಹಾ ಮಾನವತಾವಾದಿ, ಭಕ್ತಿ ಭಂಡಾರಿ ಬಸವಣ್ಣನವರು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಸಿದ್ಧರಾಮ, ಅಕ್ಕಮಹಾದೇವಿ. ಲಕ್ಕಮ್ಮಅಯ್ದಕ್ಕಿ ಮಾರಯ್ಯ ದಂಪತಿಗಳು, ಮೋಳಿಗೆ ಮಹಾದೇವಮ್ಮ-ಮಾರಯ್ಯ ದಂಪತಿಗಳು, ಮರುಳಶಂಕರದೇವ, ಹಡಪದಅಪ್ಪಣ್ಣ, ಸಮಗಾರ ಹರಳಯ್ಯ, ಡೋಹರಕಕ್ಕಯ್ಯ ಹೀಗೆ ಅಸಂಖ್ಯಾತ ಭಕ್ತರು ಮತ್ತುಕಾಯಕ ಜೀವಿಗಳೊಡಗೊಡಿ “ಅನುಭವಮಂಟಪ”ಎನ್ನುವವಿಶ್ವದಮೊಟ್ಟಮೊದಲ“ಧಾರ್ಮಿಕ-ಸಂಸತ್ತ”ನ್ನುಸ್ಥಾಪಿಸಿ ಅದರ ಮುಖೇನ ಅನುಭವಚಿಂತನ ಮಂಥನ ನಡೆಸಿದರು. ಹೀಗೆ ನಡೆಸಿದ ಅನುಭವದ ಮಂಥನದಿಂದ ಹುಟ್ಟಿಕೊಂಡಿದ್ದೇ“ವಚನಗಳು”ಎನ್ನುವಅಚ್ಚಕನ್ನಡದಜನರಾಡುವಭಾಷೆಯಸಾಹಿತ್ಯ ಈ ಕನ್ನಡ ಸಾಹಿತ್ಯಯವನ್ನುಅಧ್ಯಾತ್ಮಿಕ ಸಾಹಿತ್ಯವನ್ನಾಗಿ ಶರಣರು ಬೆಳೆಸಿದರು, ವಚನಗಳ ಸಾಹಿತ್ಯಎಷ್ಟು ಶ್ರೀಮಂತವಾಗಿದೆಯೆಂದರೆ 12ನೇ ಶತಮಾನದಿಂದ 21ನೇ ಶತಮಾನದ ಪ್ರಾರಂಭದವರೆಗೂತನ್ನಶಕ್ತಿ ಸಾಮಥ್ರ್ಯವನ್ನು ಗಟ್ಟಿಗೊಳಿಸಿಕೊಂಡೇ ಬಂದಿದೆ. ಅದುದರಿಂದಲೇಇದು ಸಾರ್ವಕಾಲಿಕ ಸಾಹಿತ್ಯ.


ಅದರೂ 1948ರಲ್ಲಿ ಮೊದಲು ನಿಜಾಮನ ಆಳ್ವಿಕೆಯಲ್ಲಿ ಕನ್ನಡ ಭಾಷೆಗೆಕುತ್ತುಒದಗಿ ಬಂದಿತು. ಹೈದರಾಬಾದಕರ್ನಾಟಕದ ಭಾಗವಾಗಿದ್ದಇಲ್ಲಿನಕನ್ನಡ ಭಾಷೆಯ ಮೇಲೆ ನಿಜಾಮನ ಆಡಳಿತ ಭಾಷೆಯಾದಉರ್ದುತನ್ನಗದಾ ಪ್ರಹಾರಮಾಡಿತೆಂದೇ ಹೇಳಬೇಕು. ಅಲ್ಲದೆ ಪಕದರಾಜ್ಯ ಮಹಾರಾಷ್ಟ್ರದ ಮರಾಠಿ ಭಾಷೆ, ಆಂಧ್ರದತೆಲುಗು ಭಾಷೆ ಇವುಗಳ ಕಾಲಡಿಸಿಕ್ಕು ಮಾತೃಬಾಷೆಕನ್ನಡ ಮಸುಕಾಗತೊಡಗಿತು.ಜನರುಕನ್ನಡಕಲಿಯುವುದು ಮತ್ತು ಮಾತನಾಡುವುದನ್ನು ಬಿಟ್ಟುಉರ್ದು, ಮರಾಠಿ. ತೆಲುಗು ಮತ್ತು ಮೋಡಿ ಭಷೆಗಳ ಮೋಡಿಗೆ ಒಳಗಾದರು, ಕನ್ನಡಕಾಲಕಸವಾಯಿತು.


ಕಲಬುರ್ಗಿಯ ಶರಣಬಸವೇಶ್ವರ ಸಂಸ್ಥಾನದ 7ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯದೊಡ್ಡಪ್ಪಅಪ್ಪ ಕನ್ನಡಾಭಿಮಾನಿಗಳಾಗಿದ್ದರು.ಕನ್ನಡ ಭಾಷೆ ಅಳಿಸಿ ಹೋಗುತ್ತಿರುದನ್ನು ಮನಗಂಡಅವರು 1934 ರಷ್ಷು ಹಿಂದೆಯೇ ಕಲಬುರ್ಗಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದ್ದರು. ಕಲ್ಯಾಣಕ್ರಾಂತಿಗೈದ ಬಸವಣ್ಣನವರ 8ನೇ ಶತಮಾನೋತ್ಸವದ ಸವಿನೆನಪಿಗಾಗಿ 1967ರಲ್ಲಿ ಕಲ್ಯಾಣ ನಾಡಿನಲ್ಲಿಎಸ್.ಎಸ್.ಕೆ.ಬಸವೇಶ್ವರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯನ್ನುತೆರೆಯುವಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅಕ್ಷರದಾಸೋಹಕ್ಕೆ ಭದ್ರಬುನಾದಿ ಹಾಕಿದರು. ಈ ಮೂಲಕ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಪ್ರಾರಂಭವಾಯಿತು.


1967ರಲ್ಲಿ ಮಹಾವಿದ್ಯಾಲಯದೊಡನೆಕನ್ನಡ ವಿಭಾಗವೂ ಪ್ರಾರಂಭವಾಯಿತು.ಪ್ರಾರಂಬದಲ್ಲಿಕನ್ನಡ ವಿಭಾದಲ್ಲಿ ಪ್ರೋ. ಮಾಣಿಕರಾವ ಧನಶ್ರೀ ಮತ್ತುಪ್ರೊ..ರಾಂಪೂರೆಎನ್ನುವವರುಉಪನ್ಯಾಸಕರಾಗಿ ನೇಮಕಗೊಂಡರು. ಈ ಇಬ್ಬರು ನಿವೃತ್ತಿ ಹೊಂದಿದ.ನಂತರ ಪ್ರೊ.ದುರ್ಗಾದಾಸಎನ್ನುವವರು ನೇಮಕಗೊಂಡು ಕೆಲಕಾಲ ಸೇವೆಸಲ್ಲಿಸಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಅವರತರುವಾಯ ಪ್ರೊ.ಕಲ್ಯಾಣರಾವ ಪಾಟೀಲ, ಪ್ರೊ.ನೀಲಾಂಬಿಕಾ ಸೇರಿಕಾರ, ಪ್ರೊ.ಚಿತ್ಕಳಾಮಠಪತಿಉಪನ್ಯಾಸಕರಾಗಿ ಸೇವೆಸಲ್ಲಿಸಿದರು.ಪ್ರೊ.ಕಲ್ಯಾಣರಾವ ಪಾಟೀಲ, ಪ್ರೊ. ಚಿತ್ಕಳಾ ಮಠಪತಿಅವರು ಸರಕಾರಿ ಮಹಾವಿದ್ಯಾಲಯಕ್ಕೆ ನೇಮಕವಾಗಿ ಹೋದರು.ಪ್ರೊ.ನೀಲಾಂಬಿಕಾ ಸೇರಿಕಾರಅವರು ಗುಲಬರ್ಗಾಕ್ಕೆ ವರ್ಗವಾಗಿ ಹೋದರು.ಪ್ರೊ.ವೆಂಕಣ್ಣಡೋಣ್ಣೇಗೌಡರ ಮತ್ತು ಪ್ರೊ. ವಿಠೋಬಾಡೋಣ್ಣೇಗೌಡರು ನೇಮಕಗೊಂಡರು. ಈ ಮಧ್ಯ ಪ್ರೊ.ಕ್ಷೇಮಲಿಂಗ ಬಿರಾದಾರ, ಪ್ರೊ.ಕೆ.ಎಸ್. ನಾಯಕ, ಪ್ರೊ.ಮಹಾನಂದಾ ಡಿ.ಯವರು ಗುಲಬರ್ಗಾದಿಂದ ವರ್ಗವಾಗಿ ಬಂದ ಸಂದರ್ಭದಲ್ಲಿ ಪ್ರೊ.ಡೋಣ್ಣೇಗೌಡರ ಸಹೋದರರು ಗುಲಬರ್ಗಾಕ್ಕೆ ವರ್ಗವಾಗಿ ಹೋಗಿದ್ದರು. ಪ್ರೊ. ವಿಠೋಬಾಡೋಣ್ಣೇಗೌಡರ್‍ಅವರುಖಾಯಂಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವರು. ಕನ್ನಡ ವಿಷಯವು ಬಿ.ಎ. ದಲ್ಲಿಅವಶ್ಯಕ ಮತ್ತುಐಚ್ಛಿಕವಾಗಿ ಕಲಿಸಲಾಗುತ್ತಿದೆ.ಬಿ.ಎಸ್ಸಿ.ಯಲ್ಲಿ ಅವಶ್ಯಕವಾಗಿ ಬೋಧಿಸಲಾಗುತ್ತಿದೆ.ಹೀಗಾಗಿ ಈ ಭಾಗದಲ್ಲಿಕನ್ನಡಅಭ್ಯಾಸಮಾಡುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮತ್ತುಕನ್ನಡಕ್ಕೆ ಹೆಚ್ಚಾಗಿ ಆಕರ್ಷಿತರಾಗುತ್ತಿರುವುದನ್ನುಇತ್ತೀಚಿನ ವರ್ಷಗಳಲ್ಲಿ ಕಾಣಬಹುದಾಗಿದೆ. ಕನ್ನಡ ವಿಭಾಗವುಗಡಿನಾಡಿನಲ್ಲಿತನ್ನಕೈಲಾದ ಅಳಿಲು ಸೇವೆಯಿಂದ ಪ್ರಾರಂಭಿಸಿ ಆನೆಯ ಸೇವೆಯನ್ನು ಮಾಡುತ್ತಿದೆಯೆಂದೇ ಹೇಳಬೇಕು.


ಕನ್ನಡ ವಿಭಾಗದ ಪ್ರಾಧ್ಯಪಕರಾದ ಪ್ರೊ.ಕ್ಷೇಮಲಿಂಗ ಬಿರಾದಾರದಿನಾಂಕ 31-05-2020 ರಂದು ವಯೋ ನಿವೃತ್ತಿರಾದ ನಂತರ ಪ್ರೊ. ವಿಠೋಬಾಡೊಣ್ಣೇಗೌಡರು ಎಂ.ಎ., ಎಂ.ಫಿಲ್‍ಮತ್ತುಎನ್.ಇ.ಟಿ ಪಧವಿದರರಾಗಿದ್ದು12.05.2005 ರಲ್ಲಿ ಸೇವೆಗೆ ಸೇರಿಕೊಂಡಿದ್ದು, ಪ್ರಸ್ತುತಕನ್ನಡದಲ್ಲಿಸಹಾಯಕ ಪ್ರಾಧ್ಯಾಪಕರಾಗಿಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ. ಅಂಬ್ರೀಶ ಭೀಮಾಣೆ ಮತ್ತು ಶ್ರೀ ಶಿವಕುಮಾರ ವ್ಹಿ.ಕೆ.ಅತಿಥಿಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಧ್ಯಾಪಕರು::

ಅಂಬರೀಶ್
ಪ್ರೊಫೈಲ್ ವೀಕ್ಷಿಸಿ
ವಿ ಜಿ ಡೊನ್ನೆ
ಪ್ರೊಫೈಲ್ ವೀಕ್ಷಿಸಿ
ಶಿವಕುಮಾರ್ ವಿ ಕೆ
ಪ್ರೊಫೈಲ್ ವೀಕ್ಷಿಸಿ